ಕುಶಾಲನಗರ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಸಿದ್ದಲಿಂಗಪುರ ಫೀಡರ್‍ನಲ್ಲಿ ಏಪ್ರಿಲ್, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಾಮಗಾರಿ ಇರುವುದರಿಂದ, ಆಲೂರು, ಸೋಮವಾರಪೇಟೆ, ಗೋಣಿಮರೂರು, ಮಾಲಂಬಿ, ಸಿದ್ದಲಿಂಗಪುರ, ಚಿಕ್ಕಳುವಾರ, ದೊಡ್ಡಳುವಾರ, ಬೈರಪ್ಪಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮೂರ್ನಾಡು 33/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್4 ಮರಗೋಡು ಫೀಡರ್‍ನಲ್ಲಿ ಏಪ್ರಿಲ್, 23 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲ ಮುಂಜಾಗೃತಾ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ಐಕೊಳ, ಕಟ್ಟೆಮಾಡು, ಕೊಂಡಂಗೇರಿ, ಮರಗೋಡು, ಹುಲಿತಾಳ, ಹೊಸ್ಕೇರಿ, ಅರೆಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.