ಮನೋವಿಜ್ಞಾನದಲ್ಲಿ ಕೊಡಗಿನ ಶಮೀನಾ ಅಸೈನಾರ್‌ ಸ್ನಾತಕೋತ್ತರ ಪದವಿ

Share this post :

ಗೋಣಿಕೊಪ್ಪ : ಕೊಡಗಿನ ಆಲೀರ ಶಮೀನಾ ಅಸೈನಾರ್ ಇಂದಿರಾಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ (Counselling Psychology)ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಗೋಣಿಕೊಪ್ಪ ಬಳಿಯ ಮಾಪಿಳ್ಳೆತೋಡುವಿನ ಅಸೈನಾರ್ ಹಾಗೂ ಫಾತಿಮಾ ದಂಪತಿಯ ಪುತ್ರಿ, ಕೊಳಕೇರಿಯ ಕಣ್ಣಪಣೆ ಅಜೀಝ್ ಅವರ ಪತ್ನಿಯಾಗಿರುವ ಶಮೀನಾ ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್‌ ಶಿಕ್ಷಕಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಓದಿನಲ್ಲಿ ಆಸಕ್ತಿ ಇದ್ದ ಇವರು 19ನೇ ವಯಸ್ಸಿನಲ್ಲಿ ವೈವಾಹಿಕ ಬಂಧಕ್ಕೆ ಒಳಗಾದರು. ಮದುವೆ ನಂತರವೂ ಓದು ಮುಂದುವರೆದ್ದು, ಮುಂದೆ ಪಿಎಚ್‌ಡಿ ಮಾಡುವ ಇರಾದೆ ಹೊಂದಿದ್ದಾರೆ.

coorg buzz
coorg buzz