ಬೀದಿ ಶ್ವಾನಗಳ ಸ್ಥಳಾಂತರ: ನಗರಸಭೆಯ ಜೊತೆ ಕೈಜೋಡಿಸಲು ಮನವಿ

Share this post :

ಮಡಿಕೇರಿ ನಗರ ಸ್ಥಳೀಯ ಸಂಸ್ಥೆಯ ವತಿಯಿಂದ ನಗರದ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಪ್ರಾಣಿ ಕಲ್ಯಾಣವನ್ನು ಮನನದಲ್ಲಿಟ್ಟುಕೊಂಡು, ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಖಾಸಗಿ ಹಾಗು ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳ ಆವರಣಗಳಲ್ಲಿ ಇರುವ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಮಡಿಕೇರಿ ನಗರಸಭೆ ಕೈಗೊಂಡಿದೆ.

ಈ ಕಾರ್ಯಕ್ರಮದ ಸತತ ಮತ್ತು ಜವಾಬ್ದರಿಯುತ ಎನ್‍ಜಿಒ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದ್ದು, ಮಡಿಕೇರಿ ನಗರಸಭೆಯೊಂದಿಗೆ ಸಹಭಾಗಿತ್ವಕ್ಕಾಗಿ ವಿನಂತಿಸುತ್ತೇವೆ. ಈ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರ ಗೊಂಡ ಬೀದಿನಾಯಿಗಳಿಗೆ ಸಹಜ ಸಂರಕ್ಷಣೆ ಪೆÇೀಷಣೆ, ಆಹಾರ, ನೀರು, ವೈದ್ಯಕೀಯ ಚಿಕಿತ್ಸೆ, ಜವಾಬ್ದಾರಿ ನಿರ್ವಹಣೆಗಾಗಿ ಎದುರು ನೋಡುತಿದ್ದೇವೆ.

ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಅಗತ್ಯ ತಾಂತ್ರಿಕ ಮಾರ್ಗದರ್ಶನ, ಕಾನೂನು ಬೆಂಬಲ ಮತ್ತು ಅನುಮತಿಯ ವ್ಯವಸ್ಥೆಯನ್ನು ಮಡಿಕೇರಿ ನಗರಸಭೆಯು ಒದಗಿಸುತ್ತದೆ. ಪ್ರಾಣಿ ಕಲ್ಯಾಣಕ್ಕೆ ಬದ್ಧವಾಗಿರುವ, ಸರ್ಕಾರಕ್ಕೆ ನೋಂದಾಯಿತ ಮತ್ತು ಮಾನ್ಯತೆ ಪಡೆದ ಎನ್‍ಜಿಒಗಳು ಈ ಮಹತ್ವದ ಕಾರ್ಯದಲ್ಲಿ ನೆರವಾಗುವಂತೆ ಕೋರುತ್ತೇವೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

coorg buzz
coorg buzz