ಪೊಲೀಸ್ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ಮಾ.09 ರಂದು ಮ್ಯಾರಥಾನ್

Marathon

Share this post :

ಪೊಲೀಸ್ ಇಲಾಖೆ ವತಿಯಿಂದ ‘ಫಿಟ್‍ನೆಸ್ ಫಾರ್ ಆಲ್’ ಎಂಬ ಧ್ಯೇಯದೊಂದಿಗೆ ಸಮಾಜದ ಆರೋಗ್ಯ ಕಾಪಾಡುವ ಸಂದೇಶದೊಂದಿಗೆ ಹಾಗೂ ಮಾದಕ ಮುಕ್ತ ಕರ್ನಾಟಕ ನಿರ್ಮಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲು ‘ಕರ್ನಾಟಕ ರಾಜ್ಯ ಪೊಲೀಸ್’ ಇಲಾಖಾ ವತಿಯಿಂದ ಮಾರ್ಚ್ 9 ರಂದು ಮ್ಯಾರಥಾನ್ (Marathon) ಓಟ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಕೇಂದ್ರಸ್ಥಾನದಲ್ಲಿ ನಡೆಯಲಿದೆ.

ಕೊಡಗು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಮಾರ್ಚ್ 9 ರಂದು ಬೆಳಗ್ಗೆ 8 ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಪ್ರಾರಂಭಿಸಿ ನಗರದ ಹಳೆಯ ಬಸ್ಸು ನಿಲ್ದಾಣ, ಐ.ಜಿ.ವೃತ್ತ, ಮಾರ್ಗವಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದವರೆಗೆ ಮ್ಯಾರಥಾನ್ ಓಟ ನಡೆಯಲಿದೆ ಎಂದು ಎಂದು ಸಂಚಾರಿ ಪೊಲೀಸ್ ಠಾಣೆ ಠಾಣಾಧಿಕಾರಿ ಅವರು ತಿಳಿಸಿದ್ದಾರೆ.