ಪುತ್ತರಿ ಹಬ್ಬಕ್ಕೆ ಹಸಿರು ಪಟಾಕಿ ಹಚ್ಚೋಣ – ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ ಅಭಿಯಾನ..!

Share this post :

Coorg BUzz Special ಮಡಿಕೇರಿ : ಪುತ್ತರಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇದೆ. ಹೊಸ ಅಕ್ಕಿಯನ್ನು ಮನೆ ತುಂಬಿಸಿಕೊಳ್ಳಲು, ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಜನ ಕಾತರರಾಗಿದ್ದಾರೆ. ಈ ಮಧ್ಯೆ ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬದ ಭಾಗವಾಗಿ ಒಂದು ಅಭಿಯಾನ ಸದ್ದು ಮಾಡುತ್ತಿದೆ.
ಅದೇ ಹಸಿರು ಪಟಾಕಿ ಕ್ಯಾಂಪೇನ್.‌ ದೀಪಾವಳಿ ಹಬ್ಬದಂತೆ ಕೊಡಗಿನಲ್ಲಿ ಆಚರಿಸುವ ಪುತ್ತರಿಯಲ್ಲೂ ತರಹೇವಾರಿ ಪಟಾಕಿಗಳು ಸದ್ದು ಮಾಡುತ್ತವೆ. ಈ ಬಾರಿ ಕೊಡಗಿನ ಪರಿಸರ ಕಾಳಜಿಯೊಂದಿಗೆ ಹಸಿರು ಪಟಾಕಿಯನ್ನು ಬಳಸೋಣ ಎಂಬ ಸಂದೇಶದೊಂದಿಗೆ ಸರಪಳಿ ಅಭಿಯಾನ ಆರಂಭವಾಗಿದೆ.
ವೀರಾಜಪೇಟೆಯ ಕಾಣತಂಡ ಬೀನಾ ಜಗದೀಶ್‌ ಅವರು ಈ ಅಭಿಯಾನವನ್ನು ಆರಂಭ ಮಾಡಿದವರು. ನಮ್ಮ ಕೊಡಗು ಸ್ವಚ್ಛ ಕೊಡಗು ಎಂಬ ಅಭಿಯಾನ ನಡೆದಿದೆ. ಈ ಅಭಿಯಾನಕ್ಕೆ ಅರ್ಥ ಬರಬೇಕಾದರೆ ಮುಂದೆಯೂ ನಮ್ಮ ಕೊಡಗನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹೀಗಾಗಿ ಪುತ್ತರಿ ಹಬ್ಬದಲ್ಲಿ ಆದಷ್ಟು ಹಸಿರು ಪಟಾಕಿಯನ್ನು ಬಳಸಿ ನಮ್ಮ ಕೊಡುಗೆಯನ್ನು ನೀಡೋಣ ಎಂಬ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಅಭಿಯಾನದ ವಿಡಿಯೋವನ್ನು ಮುಂದುರೆಸಲು ಕೋಳೇರ ರೇವಾ, ದೇಕಮಾಡ ಬಿಷನ್‌ ಪೊನ್ನಣ್ಣ ಅವರನ್ನು ಟ್ಯಾಗ್‌ ಮಾಡಿದ್ದಾರೆ.
ಹೇಗೆ ನಡೆಯುತ್ತೆ ಈ ಅಭಿಯಾನ : ಪರಿಸರ ಕಾಳಜಿಯ ಸಂದೇಶವನ್ನು ಹೊತ್ತು ಹಸಿರು ಪಟಾಕಿಯನ್ನು ಬಳಸೋಣ ಎಂಬ ವಿಡಿಯೋವನ್ನು ಮಾಡಿ ಅದನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ ಮಾಡುವುದು. ಜೊತೆಗೆ ಇದನ್ನು ಮುಂದುವರೆಸಲು ತಾನು ಬಯಸಿದವರನ್ನು ಟ್ಯಾಗ್‌ ಮಾಡುವುದು. ಅವರು ಅದನ್ನು ಸ್ವೀಕಾರ ಮಾಡಿ, ತಮ್ಮ ವೀಡಿಯೋದಲ್ಲಿ ತಮ್ಮ ಅಪ್ತರನ್ನು ಟ್ಯಾಗ್‌ ಮಾಡುವುದು. ಹೀಗೆ ಇದು ಸರಪಳಿಯಂತೆ ಮುಂದುವರೆಯಯುತ್ತದೆ. ಈಗಾಗಲೇ ಅನೇಕ ಮಂದಿ ಇದಕೆ ಬೆಂಬಲ ಸೂಚಿಸಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

coorg buzz
coorg buzz