ನಾಪೋಕ್ಲು : ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಪುತ್ತರಿ ಹಬ್ಬ ಈ ಬಾರಿ ಡಿ.04ಕ್ಕೆ ನಿಗದಿಯಾಗಿದೆ.
ಮಳೆ ದೇವರು ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದಿನಾಂಕ ನಿಗದಿಯ ಧಾರ್ಮಿಕ ಕಾರ್ಯ ಇಂದು ನಡೆಯಿತು. ಸಾರ್ವತ್ರಿಕವಾಗಿ ಡಿಸೆಂಬರ್ 04 ರಂದು ರೋಹಿಣಿ ನಕ್ಷತ್ರದಲ್ಲಿ ಹಬ್ಬಾಚರಣೆ ನಡೆಯಲಿದೆ. ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು. ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು. ಭೋಜನಕ್ಕೆ 10.10 ಗಂಟೆಗೆ ಮುಹೂರ್ತ ನಿಗದಿಯಾಗಿದೆ.
ಸಾರ್ವತ್ರಿಕವಾಗಿ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು. ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು. 10.40 ಗಂಟೆಗೆ ಭೋಜನ ಮುಹೂರ್ತ ನಿಗದಿಯಾಗಿದೆ.
ಈ ಧಾರ್ಮಿಕ ಕಾರ್ಯದಲ್ಲಿ ದೇವತಕ್ಕ ಪರದಂಡ ಕುಟುಂಬಸ್ಥರು, ಅಮ್ಮಂಗೇರಿ ಕಣಿಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



