KMSA: ನಾಲ್ವರು ನಿರ್ದೇಶಕರ ನೇಮಕ

Share this post :

ಪೊನ್ನಂಪೇಟೆ: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಆಡಳಿತ ಮಂಡಳಿಗೆ ನೂತನವಾಗಿ ನಾಲ್ವರು ನಿರ್ದೇಶಕರನ್ನು ನೇಮಿಸಲಾಗಿದೆ. ಕಂಡಂಗಾಲದ ಮಂದಮಾಡ ರಫೀಕ್ (ಮುನ್ನ), ಬೇಗೂರಿನ ಆಲೀರ ಬಿ. ಮೂಸ, ಎಡಪಾಲದ ಕುಪ್ಪೋಡಂಡ ಮಹಮ್ಮದ್ ಮತ್ತು ಚೆರಿಯಪರಂಬುವಿನ ಪರವಂಡ ಸಿರಾಜ್ ಎಂಬುವವರೇ ನೂತನವಾಗಿ ನೇಮಕಗೊಂಡ ನಿರ್ದೇಶಕರಾಗಿದ್ದಾರೆ. ಕೆ.ಎಂ.ಎಸ್.ಎ. ಅಧ್ಯಕ್ಷರಾದ ಆಲೀರ ರಶೀದ್ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನೇಮಕ ಪ್ರಕ್ರಿಯೆ ನಡೆಯಿತು.

ಈ ಕುರಿತು ಹೇಳಿಕೆ ನೀಡಿರುವ ಕೆ.ಎಂ.ಎಸ್.ಎ. ಅಧ್ಯಕ್ಷರಾದ ಆಲೀರ ರಶೀದ್, ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯನ್ನು ವಿವಿಧ ಕ್ರೀಡಾ ಆಯೋಜನಾ ಮತ್ತು ಪ್ರತಿಭೆಗಳಿಗೆ ಉತ್ತೇಜನಕಾರಿ ಸಂಘಟನೆಯಾಗಿ ರೂಪಿಸಲಾಗುವುದು. ಇದರ ಭಾಗವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿರುವ ಕೊಡವ ಮುಸ್ಲಿಂ ಸಮುದಾಯದ ಕ್ರೀಡಾಸಕ್ತರನ್ನು ಸಂಘಟಿಸಿ ಅಕಾಡೆಮಿಯನ್ನು ಹಂತಹಂತವಾಗಿ ವಿಸ್ತರಿಸಲಾಗುವುದು. ಇದರ ಮೊದಲ ಭಾಗವಾಗಿ ಇವರು ನಿರ್ದೇಶಕರನ್ನು ಆಡಳಿತ ಮಂಡಳಿಗೆ ನೇಮಕಗೊಳಿಸಲಾಗಿದೆ. ಮುಂದೆಯೂ ಮತ್ತಷ್ಟು ಕ್ರೀಡಾಸಕ್ತರನ್ನು ಸೇರಿಸಿ ಕೆ.ಎಂ.ಎಸ್.ಎ. ಯನ್ನು ಇನ್ನಷ್ಟು ವಿಸ್ತರಿಸಿ ಸಂಘಟಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

coorg buzz
coorg buzz