ವೀರಾಜಪೇಟೆ : ಪತ್ನಿಯ ಕೊ*ಲೆಗೈದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ವೀರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನ ಚೋಮಚ್ಚರ ಪಿ. ಲವ(30) ಶಿಕ್ಷೆಗೊಳಗಾದ ವ್ಯಕ್ತಿ. ಈತ 2022 ಏಪ್ರಿಲ್ 28ರಂದು ತನ್ನ ಪತ್ನಿ ಸುಮಿತ್ರಳನ್ನು ಹ*ತ್ಯೆಗೈದಿದ್ದ. ಪತ್ನಿ ತನಗೆ ಹೇಳದೆ ಮನೆಯಿಂದ ಹೋಗುತ್ತಾಳೆ ಎಂಬ ವಿಚಾರವಾಗಿ ಗಲಾಟೆ ಶುರುವಾಗಿ, ನಂತರ ಕಬ್ಬಿಣದ ಪೈಪ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಪರಿಣಾಮ ಆಕೆ ಮೃತಪಟ್ಟಿದ್ದರು.
ಈ ಸಂಬಂದ ವೀರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಎಸ್. ನಟರಾಜ್ ಪೀಠದಲ್ಲಿ ನಡೆದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಂ. 302 ಭಾ.ದಂ.ಸಂ ಅಡಿಯಲ್ಲಿ ಅಪರಾಧಕ್ಕೆ ಕಠಿಣ ಜೀವಾಧಿ ಶಿಕ್ಷೆ ಮತ್ತು 25 ಸಾವಿರ
ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದ್ದಲ್ಲಿ 06 ತಿಂಗಳ ಸಾದಾ ಜೈಲುವಾಸ ಅನುಭವಿಸುವಂತೆ ಶಿಕ್ಷೆ ಪ್ರಕಟವಾಗಿದೆ. ಸರ್ಕಾರದ ಪರವಾಗಿ ಯಾಸೀನ್ ಅಹ್ಮದ್ ವಿರಾಜಪೇಟೆ ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ನೇತೃತ್ವದ ತಂಡ ಮಾಡಿತ್ತು.



