ಬಿಜೆಪಿ ಕಾರ್ಯಕರ್ತ ವಿನಯ್‌ ಆತ್ಮಹತ್ಯೆ ಪ್ರಕರಣ – ಮೂವರ ಬಂಧನಕ್ಕೆ ಆಗ್ರಹಿಸಿದ ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ…

Share this post :

ಮಡಿಕೇರಿ : ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆಗೆ ಕಾಂಗ್ರೆಸ್ ಶಾಸಕ ಪೊನ್ನಣ್ಣ, ಮಂತರ್ ಗೌಡ,  ಕಾಂಗ್ರೆಸ್ ಮುಖಂಡ ತೆನ್ನೀರ್ ಮೈನಾ ಕಾರಣ. ಈ ಮೂವರನ್ನ ಬಂಧಿಸಬೇಕು ಎಂದು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಆಗ್ರಹಿಸಿದ್ದಾರೆ.

ಡೆತ್ ನೋಟ್ ಬರೆದಿಟ್ಟು ಬಿಜೆಪಿ ಕಾರ್ಯಕರ್ತವಿನಯ್ ಆತ್ಮಹತ್ಯೆಗೆ ಶರಣಾದ ವಿಚಾರಕ್ಕೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಕೆ.ಜಿ ಬೋಪಯ್ಯ,  ಕೊಡಗು ಜಿಲ್ಲಾ ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ.  ವಿನಯ್ ವಿರುದ್ದ ರೌಡಿ ಶೀಟ್ ಓಪನ್ ಮಾಡಲು ತಯಾರಿ ನಡೆದಿತ್ತು.  ವಿನಯ್ ಬಂಧನಕ್ಕೂ ಪೊಲೀಸರು ಮುಂದಾಗಿದ್ದರು. ವಿನಯ್ ವಿರುದ್ದ  ಎಫ್ ಐಆರ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.  ವಿನಯ್‌ಗೆ ಧೈರ್ಯ ಹೇಳಿದರೂ  ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ವಿಚಾರ ಎಂದರು.

ವಿನಯ್ ಆತ್ಮಹತ್ಯೆಗೆ ಶಾಸಕ ಪೊನ್ನಣ್ಣ, ಮಂತರ್ ಗೌಡ,  ಕಾಂಗ್ರೆಸ್ ಕಾರ್ಯಕರ್ತ ತೆನ್ನೀರ್ ಮೈನಾ ಕಾರಣ. ಮೂವರ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಜಿ ಬೋಪಯ್ಯ ಒತ್ತಾಯಿಸಿದರು. ಅಲ್ಲದೆ ಕಾಂಗ್ರೆಸ್ ದುರಾಡಳಿತದ ವಿರುದ್ದ ನಾವು ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ