ಭಜನೆ, ನೃತ್ಯ, ಹಾಡು – ಸುಂದರ ಪರಿಸರದಲ್ಲಿ ಮೇಳೈಸಿದ ದೀಪಾವಳಿ ಸಂಭ್ರಮ..!

Share this post :

ಮಡಿಕೇರಿ : ಶ್ರೀ ರಾಮಾಂಜನೇಯ ಭಜನಾ ತಂಡ, ಆರೋಹಣ, ಯೋಗ ಭಾರತಿ ಬಳಗದ ವಾರ್ಷಿಕ ದೀಪಾವಳಿ ಸಂಭ್ರಮ ಮಂಗಳವಾರ ರಾತ್ರಿ ವರ್ಣರಂಜಿತವಾಗಿ ಜರುಗಿತು.
ಮಡಿಕೇರಿ ಹೊರವಲಯದ ಅಭಿರತಿ ಸ್ಟೇನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂರು ತಂಡದ ಸದಸ್ಯರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಭಜನೆ, ನೃತ್ಯ, ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಅಭಿರತಿ ಮಾಲೀಕರಾದ ಜಯಂತಿ ಸಂಜಯ್‌ ದಂಪತಿ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡದಿರು. ಸವಿತಾ ತಂಡದವರು ಪೂಜೆ, ಮಂಗಳಾರತಿ ನೆರವೇರಿಸಿದರು. ಅತಿಥಿಯಾಗಿ ಪತ್ರಕರ್ತ ಕಿಶೋರ್‌ ರೈ ಕತ್ತಲೆಕಾಡು ಪಾಲ್ಗೊಂಡಿದ್ದರು. ಮಹಿಳೆಯರು ಆವರಣದಲ್ಲಿ ಹಣತೆ ಬೆಳಗಿ ಇರುಳು ಕವಿದ ಹೊತ್ತಿನಲ್ಲಿ ಬೆಳಕು ಮೂಡಿಸಿದರು. ರಾಮಾಂಜನೇಯ ಭಜನಾ ಬಳಗದವರ ಭಜನೆ ಸಂಭ್ರಮಕ್ಕೆ ಮತ್ತಷ್ಟು ಮೆರುಗು ಕೊಟ್ಟಿತು. ಸಿಂಚನಾ ಮತ್ತು ತಂಡದವರು ಸಾಂಪ್ರದಾಯಿಕ ನೃತ್ಯದ ಮೂಲಕ ರಂಜಿಸಿದರು.
ಆರೋಹಣ ಅಧ್ಯಕ್ಷ ಸುಧೀರ್ ಸ್ವಾಗತಿಸಿದರು. ಮೂರು ತಂಡದ ವಾರ್ಷಿಕ ಕಾರ್ಯಚಟುವಟಿಕೆಯ ವರದಿಯನ್ನು ಪ್ರತಿಭಾ ವಾಚಿಸಿದರು. ಮಮತಾ ಅತಿಥಿ ಪರಿಚಯ ಮಾಡಿದರು. ಕಲಾವಿದರಾದ ರವಿ ಭೂತನಕಾಡು, ಕೆ.ಕೆ.ಮಹೇಶ್‌ ಕುಮಾರ್ ಹಾಗೂ ಇತರರು ವಿವಿಧ ಹಾಡು ಹಾಡಿದರು. ಆಗಮಿಸಿದ್ದ ಎಲ್ಲರೂ ಸಹಭೋಜನದಲ್ಲಿ ಪಾಲ್ಗೊಂಡಿದ್ದರು.

coorg buzz
coorg buzz