ವೀರಾಜಪೇಟೆ : ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ವಿಜಯ ನಗರ ನಿವಾಸಿಗಳಾದ ಮೊಹಮ್ಮದ್ ಎಂಬವರ ಪುತ್ರ ಎಂ.ಎಂ. ಮುಸ್ತಾಫ(42), ಮೊಹಮ್ಮದ್ ಹುಸೈನ್ ಎಂಬವರ ಪುತ್ರ ಎಂ.ಎಸ್. ತನ್ವಿರ್(41) ಗೋಮಾಂಸ ಮಾರಾಟಕ್ಕೆ ಮುಂದಾಗಿ ಪೊಲೀಸರ ವಶಕ್ಕೆ ಸಿಕ್ಕವರು. ಇಬ್ಬರು ಸೇರಿಕೊಂಡು ವೀರಾಜಪೇಟೆಯ ವಿವಿಧೆಡೆ ಗೋಮಾಂಸ ಮಾರಾಟಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.



