ಮಡಿಕೇರಿ : ಪೊನ್ನಂಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ‘ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮದ ಸದರಿ ವ್ಯಾಪ್ತಿಗೊಂಡಿರುವ ಪರಿಶಿಷ್ಟ ಪಂಗಡ ಗಿರಿಜನ ಉಪ ಯೋಜನೆಯಡಿ ಆಯ್ದ ಮೀನು ಮಾರಾಟಗಾರರಿಗೆ/ ಮೀನುಗಾರಿಕೆ ವೃತ್ತಿ ಅವಲಂಬಿಸಿರುವವರಿಗೆ ದ್ವಿಚಕ್ರ ಮೀನು ಮಾರಾಟ ವಾಹನ ಖರೀದಿಗೆ ಶೇ.90 ಆರ್ಥಿಕ ನೆರವು ನೀಡಲು ಒಂದು ಭೌತಿಕ ಗುರಿ ನಿಗದಿಪಡಿಸಿದ್ದು, ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಮತ್ತು ಅವಶ್ಯ ದಾಖಲಾತಿಯನ್ನು ಡಿಸೆಂಬರ್ 04 ರ ಸಂಜೆ 5 ಗಂಟೆಯೊಳಗೆ ಪೊನ್ನಂಪೇಟೆ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆ ತಾಲ್ಲೂಕಿನವರು 08274-261477 ನ್ನು ಅಥವಾ ಪೊನ್ನಂಪೇಟೆ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪೊನ್ನಂಪೇಟೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ.ಸಚಿನ್ ತಿಳಿಸಿದ್ದಾರೆ.



