ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 35ನೇ ವಾರ್ಷಿಕೋತ್ಸವ ಪ್ರಯುಕ್ತ ಅಖಂಡ ಏಕಾಹ ಭಜನೆ ಡಿ.14ಕ್ಕೆ

Share this post :

ಮಡಿಕೇರಿ : ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 35ನೇ ವಾರ್ಷಿಕೋತ್ಸವ ಪ್ರಯುಕ್ತ ಅಖಂಡ ಏಕಾಹ ಭಜನೆ ಕಾರ್ಯಕ್ರಮ ಡಿಸೆಂಬರ್‌ 14(ಭಾನುವಾರ) ಮಡಿಕೇರಿಯಲ್ಲಿ ನಡೆಯಲಿದೆ.
ಶ್ರೀ ಆಂಜನೇಯ ದೇವಾಲಯದಲ್ಲಿ ಅಂದು ಬೆಳಗ್ಗೆ 6.10ರಿಂದ ಭಜನೆ ಆರಂಭವಾಗಲಿದ್ದು, ಮಡಿಕೇರಿ ನಗರಸಭೆ ಅಧ್ಯಕ್ಷೆ ಕೆ.ಪಿ. ಕಲಾವತಿ ಭದ್ರದೀಪ ಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಜಿಲ್ಲೆಯ ವಿವಿಧೆಡೆಯ 15 ತಂಡಗಳಿಂದ ನಿರಂತರ ಭಜನೆ ಇರಲಿದೆ. ಸಂಜೆ ವಿನಾಯಕ ಸೇವಾ ಟ್ರಸ್ಟ್‌ ಕತ್ತಲೆಕಾಡು, ಆದಿಶಕ್ತಿ ವಿನಾಯಕ ಭಜನಾ ಮಂಡಳಿ ಉಡೋತ್‌ಮೊಟ್ಟೆ, ಮದೆ ಮಾಧೂರಪ್ಪ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ಪ್ರದರ್ಶನವಿರಲಿದೆ.
ಸಂಜೆ 07 ಗಂಟೆಗೆ ಮಹಾಮಂಗಳಾರತಿ, ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ. ಚಿದ್ವಿಲಾಸ್‌ ಹಿತವಚನ ನೀಡಲಿದ್ದಾರೆ. ಅತಿಥಿಆಗಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಭಜನೆಯಲ್ಲಿ ಪಾಲ್ಗೊಳ್ಳುವ ತಂಡಗಳು : ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಸತ್ಯಸಾಯಿ ಭಜನಾ ಸಮಿತಿ ಮಡಿಕೇರಿ, ಭಕ್ತಿ ಲಹರಿ ತಂಡ ಮಡಿಕೇರಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಂಗಳಾದೇವಿ ನಗರ, ಮದೆಮಹೇಶ್ವರ ಭಜನಾ ಮಂಡಳಿ, ಶ್ರೀ ಸನಾತನ ಭಜನಾ ಮಂಡಳಿ ಕಗ್ಗೋಡ್ಲು, ಶ್ರೀದೇವಿ ಭಜನಾ ಮಂಡಳಿ ಜೋಡುಪಾಲ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ 2ನೇ ಮೊಣ್ಣಂಗೇರಿ, ಶ್ರೀ ವಿನಾಯಕ ಸೇವಾ ಟ್ರಸ್ಟ್‌ ಕತ್ತಲೆಕಾಡು, ಜ.ತಿಮ್ಮಯ್ಯ ಪಬ್ಲಿಕ್‌ ಶಾಲೆ, ಮಡಿಕೇರಿ, ಶ್ರೀ ಕೋದಂಡರಾಮ ಭಜನಾ ಮಂಡಳಿ ಮಡಿಕೇರಿ, ಇಸ್ಕಾನ್‌ ತಂಡ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ದೇವರಕೊಲ್ಲಿ, ಶೃತಿಲಯ ಭಜನಾ ಮಂಡಳಿ ಮಡಿಕೇರಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಡಿಕೇರಿ.

coorg buzz
coorg buzz