ಮಡಿಕೇರಿ : ಸಿಕ್ಕಿಂನ ಬೌದ್ಧ ಬಿಕ್ಷುಗಳಿಗೆ ನೀಡಿರುವ “ಸಂಘ” ವರ್ಚುವಲ್, ಅಮೂರ್ತ (ಅದೃಶ್ಯ) ಕ್ಷೇತ್ರದ ರೀತಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರಿಗೆ(kodava) ಕೂಡ ವಿಶೇಷ ಪ್ರಾತಿನಿಧ್ಯ ಅಥವಾ ಪರ್ಯಾಯವಾಗಿ ಪ್ರತ್ಯೇಕ ಲೋಕಸಭೆ ಮತ್ತು ವಿಧಾನಸಭೆಯ ಕೊಡವ ಮತ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಿರುನಾಣಿಯಲ್ಲಿ ಮಾನವ ಸರಪಳಿ ರಚಿಸಿ ಹಕ್ಕೊತ್ತಾಯವನ್ನು ಮಂಡಿಸಿತು.
ಸAಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಬೇಕು, ಕೊಡವ ಲ್ಯಾಂಡ್(kodava land) ಭೂರಾಜಕೀಯ ಸ್ವಾಯತ್ತತೆ ಘೋಷಿಸಬೇಕು, ಎಸ್‌ಟಿ(ST) ಟ್ಯಾಗ್ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಸಿಎನ್‌ಸಿ ಸದಸ್ಯರು ಆದಿಮಸಂಜಾತ ಕೊಡವರ ಪ್ರಗತಿ ಹಾಗೂ ರಕ್ಷಣೆಗಾಗಿ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಒದಗಸಿಕೊಡಬೇಕೆಂದು ಒತ್ತಾಯಿಸಿದರು.
ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ(president) ಎನ್.ಯು.ನಾಚಪ್ಪ ಅವರು, ಕೊಡವರು ಬೇರೆಯೇ ರೇಸ್/ ಮೂಲ ವಂಶಸ್ಥ ಜನಾಂಗವಾಗಿದ್ದು, ಅವರ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಗುರುತಿಸಿ ೧೮೭೧-೭೨ರಿಂದ ೧೯೩೧ರ ವರೆಗೆ ನಡೆಸಿದ ಜನಗಣತಿಯನ್ನು ಪುನರ್ ಮಾನದಂಡಗೊಳಿಸಿ ಕೊಡವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದರು.
ವಿಧಾನಸಭೆ ಮತ್ತು ಸಂಸತ್ ಕ್ಷೇತ್ರಗಳ ಪುನರ್ ಪರಿಶೀಲನೆ, ಪುನರ್ ವ್ಯಾಖ್ಯಾನಕ್ಕಾಗಿ ನಡೆಯುತ್ತಿರುವ ಗಡಿ ರಚನಾ ಪ್ರಕ್ರಿಯೆಯಿಂದ ಕೊಡವ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು. ಮೂವರು ಪ್ರಭಾವಿ ರಾಜಕಾರಣಿಗಳು ಸುಳ್ಯದಲ್ಲಿನ ತಮ್ಮ ಭದ್ರಕೋಟೆಯನ್ನು ಕೊಡವಲ್ಯಾಂಡ್‌ನೊAದಿಗೆ ವಿಲೀನಗೊಳಿಸುವ ಒಳಸಂಚು ರೂಪಿಸಿದ್ದು, ಈ ಪ್ರಯತ್ನದಿಂದಾಗಿ ಸಂಸತ್ ಮತ್ತು ವಿಧಾನಸಭೆಯಲ್ಲಿ ಆದಿಮಸಂಜಾತ ಕೊಡವರ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಬಹುದು ಎಂದು ಆರೋಪಿಸಿದರು.
ಪ್ರತಿಯೊಂದು ಕುಟುಂಬದಲ್ಲಿ ಒಬ್ಬರಂತೆ ಸೇನೆಗೆ ಸೇರುವ ಮೂಲಕ ರಾಷ್ಟಿçÃಯ ಭದ್ರತೆಯನ್ನು ಕೊಡವರು ಕಾಪಾಡುತ್ತಿದ್ದಾರೆ. ಕಟ್ಟುನಿಟ್ಟಾದ ಕುಟುಂಬ ಯೋಜನೆಯ ಪಾಲನೆಯ ಮೂಲಕ ರಾಷ್ಟç ನಿರ್ಮಾಣದಲ್ಲಿ ಕೊಡವರು ಮಹತ್ವದ ಪಾತ್ರ ವಹಿಸಿದ್ದಾರೆ. ಆದಿಮಸಂಜಾತ ಕೊಡವ ಸಮುದಾಯ ನೀಡಿರುವ ಮತ್ತು ನೀಡುತ್ತಿರುವ ವಿಶಿಷ್ಟ ಕೊಡುಗೆಗಳನ್ನು ಸರ್ಕಾರ ಪರಿಗಣಿಸಬೇಕು. ವಿಶೇಷವಾಗಿ ಅತೀ ಸಣ್ಣ ಕೊಡವ ಜನಾಂಗದ ವಿಚಾರದಲ್ಲಿ ಜನಸಂಖ್ಯೆಯು ಕ್ಷೇತ್ರ ಮರುವಿಂಗಡಣೆಗೆ ಏಕೈಕ ಮಾನದಂಡವಾಗಿರಬಾರದು ಎಂದರು.
ಕೊಡವ ಸಮುದಾಯ ಕೊಡವಲ್ಯಾಂಡ್ ಗೆ ಸೀಮಿತವಾದ ಒಂದು ವಿಶಿಷ್ಟ ಜನಾಂಗವಾಗಿದೆ. ಕೊಡವಲ್ಯಾಂಡ್ ಕೊಡವರ ಸಾಂಪ್ರದಾಯಿಕ ಮತ್ತು ಪೂರ್ವಜರ ತಾಯ್ನಾಡಾಗಿದೆ. ಕಾಶ್ಮೀರಿ ಪಂಡಿತರು, ರೆಡ್ ಇಂಡಿಯನ್ನರು, ಟಿಬೆಟಿಯನ್ ಬೂತಿಯಾಗಳು, ಸ್ಕಾಟಿಷ್ ಜನಾಂಗ, ಸೆಲ್ಟಿಕ್ ಜನಾಂಗ ಮತ್ತು ಕುರ್ದಿಶ್ ಜನರಿಗೆ ಸಮನಾಂತರವಾದ ಆದಿಮಸಂಜಾತ ಜನಾಂಗಕ್ಕೆ ಸೇರಿದ ಕೊಡವರಿಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ನೀಡುವ ಅನಿವಾರ್ಯತೆ ಇದೆ. ಭಾರತೀಯ ಸಂವಿಧಾನದ ೬ ಮತ್ತು ೮ ನೇ ಶೆಡ್ಯೂಲ್ ಪಟ್ಟಿಗಳೊಂದಿಗೆ ವಿಧಿ ೨೪೪ ಮತ್ತು ೩೭೧ನೇ ವಿಧಿ ಬುಡಕಟ್ಟು ಪ್ರದೇಶಗಳ ಆಡಳಿತ ಹಾಗೂ ಭಾಷೆಗಳ ಗುರುತಿಸುವಿಕೆಯನ್ನು ಕ್ರಮವಾಗಿ ಒದಗಿಸುತ್ತದೆ.
೧೮೭೧-೭೨ ರಿಂದ ೧೯೩೧ ರವರೆಗಿನ ಬ್ರಿಟಿಷ್ ಸರ್ಕಾರದ ಅವಧಿಯ ಜನಗಣತಿ ಕಾರ್ಯಾಚರಣೆಗಳು ಕೊಡವರನ್ನು ಪ್ರತ್ಯೇಕ ಜನಾಂಗ ಮತ್ತು ಸಮುದಾಯವೆಂದು ಗುರುತಿಸಿ ಕೂರ್ಗಿಸ್ ಅಥವಾ ಕೊಡವರು ಎಂದೂ ಕರೆಯಲಾಯಿತು. ಇದು ನಾಲ್ಕು ವರ್ಣಗಳ ಜಾತಿ ವ್ಯವಸ್ಥೆ ಮತ್ತು ಧಾರ್ಮಿಕ ಸಂಬAಧಗಳಿAದ ಭಿನ್ನವಾಗಿದೆ.
೧೯೪೧ ರಿಂದ ಜನಗಣತಿ ನಡೆಸಿದವರು ಕೊಡವರನ್ನು ಅಸ್ತಿತ್ವವಲ್ಲದ ಘಟಕವಾಗಿ ದಾಖಲಿಸಲು ಪ್ರಾರಂಭಿಸಿದವು. ಅವರ ಸ್ಥಾನಮಾನವನ್ನು ಒಂದು ಅನನ್ಯ ಮತ್ತು ಸ್ವತಂತ್ರ ಸಮುದಾಯಕ್ಕಿಂತ ಕೇವಲ ಜಾತಿಗೆ ಇಳಿಸಿದವು. ಈ ತಪ್ಪು ನಿರೂಪಣೆ ೨೦೧೧ ರ ಜನಗಣತಿಯವರೆಗೂ ಮುಂದುವರೆದಿದ್ದು, ಕೊಡವ ಸಮುದಾಯದ ಗುರುತು, ಸಂಸ್ಕೃತಿ ಮತ್ತು ಭವಿಷ್ಯಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ.
ಜನಸಂಖ್ಯಾ ವಿಜ್ಞಾನದ ಮತ್ತು ಮಾನವ ಶಾಸ್ತçದ ಜಾಗತಿಕ ನಕ್ಷೆಯಿಂದ ಆದಿಮಸಂಜಾತ ಕೊಡವ ಜನಾಂಗವನ್ನು ಅಳಿಸಿ ಹಾಕಿದ ಕ್ರಮವನ್ನು ಜನಾಂಗೀಯ ನರಮೇಧ, ಜನಾಂಗೀಯ ಶುದ್ಧೀಕರಣ ಮತ್ತು ನಿರ್ನಾಮದ ಒಂದು ರೂಪವೆಂದು ಪರಿಗಣಿಸುತ್ತದೆ. ಇದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮಾವೇಶದ ತತ್ವಗಳನ್ನು ಉಲ್ಲಂಘಿಸುವ ಅಮಾನವೀಯ, ಸಂವಿಧಾನಬಾಹಿರ ಮತ್ತು ಅನ್ಯಾಯದ ಕೃತ್ಯವಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.
ವಿಶಿಷ್ಟ ಜನಾಂಗೀಯ ಗುಂಪಾದ ಕೊಡವರ ಸೂಕ್ತ ಸ್ಥಾನವನ್ನು ಕಸಿದುಕೊಂಡ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಬೇಕು. ಕೊಡವರನ್ನು ಮೂಲ ವಂಶಸ್ಥ ಕೊಡವ ಸಮುದಾಯಕ್ಕೆ ಸೀಮಿತಗೊಳಿಸಿದ ಏಕ ಮತ್ತು ವಿಭಿನ್ನ ಜನಾಂಗೀಯ ಗುಂಪು ಎಂದು ಗುರುತಿಸಬೇಕು. ಕೊಡವರಿಗೆ ಸಂಬAಧಿಸಿದಂತೆ ಜಾತಿಯ ಯಾವುದೇ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಕೊಡವ ಜನಾಂಗವು ಒಂದೇ ಜನಾಂಗ. ಕೊಡವ ಸಮುದಾಯದಲ್ಲಿ ಯಾವುದೇ ಷರತ್ತು, ಉಪ-ಷರತ್ತು, ಉಪ-ಪಂಗಡ ಅಥವಾ ಉಪ-ಜಾತಿ ಇಲ್ಲ. ನಾವು ಕೊಡವ ಜನಾಂಗದವರು ಮತ್ತು ನಮ್ಮ ತಾಯಿ ಬೇರುಗಳು ಕೊಡವಲ್ಯಾಂಡ್‌ಗೆ ಮಾತ್ರ ಸೀಮಿತವಾಗಿವೆ. ಕೊಡವಲ್ಯಾಂಡ್‌ನ ಹೊರಗೆ, ನಮ್ಮ ಯಾವುದೇ ಸಾಂಸ್ಕೃತಿಕ ಬೇರುಗಳಿಲ್ಲ. ಪ್ರಾಚೀನ ಕಾಲದಿಂದ ಇಂದಿನವರೆಗೆ, ನಾವು ಒಂದು ಜನಾಂಗವಾಗಿ ನಮ್ಮ ವಿಶಿಷ್ಟ ಗುರುತನ್ನು ಉಳಿಸಿಕೊಂಡಿದ್ದೇವೆ.
ಕೊಡವರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು, ೧೯೪೧-೨೦೧೧ ರ ಜನಗಣತಿ ಎಣಿಕೆಗಳನ್ನು ರದ್ದುಗೊಳಿಸಲು ಮತ್ತು ೧೮೭೧-೭೨ ರಿಂದ ೧೯೩೧ ರ ಜನಗಣತಿ ಎಣಿಕೆಗಳಲ್ಲಿ ಪ್ರತಿಫಲಿಸಿದಂತೆ ಕೊಡವ ಸಮುದಾಯದ ಅಧಿಕೃತ ಪ್ರಾತಿನಿಧ್ಯವನ್ನು ಪುನಃಸ್ಥಾಪಿಸಲು ಸಿಎನ್‌ಸಿ ಒತ್ತಾಯಿಸುತ್ತದೆ ಎಂದರು.
ಕೊಡವರನ್ನು ವಿಶಿಷ್ಟ ಜನಾಂಗವೆAದು ಗುರುತಿಸಬೇಕು, ಜನಗಣತಿ ವರ್ಗೀಕರಣದ ತಿದ್ದುಪಡಿಯಾಗಬೇಕು ಮತ್ತು ಕೊಡವರನ್ನು ಜಾತಿ ಎಂದು ತಪ್ಪಾಗಿ ದಾಖಲಿಸಬಾರದು. ವಿಶ್ವಸಂಸ್ಥೆಯ ಆದಿಮಸಂಜಾತ ಹಕ್ಕುಗಳ ಅಡಿಯಲ್ಲಿ ಮಾನ್ಯತೆ ನೀಡಬೇಕು. ಇತಿಹಾಸದುದ್ದಕ್ಕೂ ಹೊರಗಿನ ಆಡಳಿತಗಾರರು ವಶಪಡಿಸಿಕೊಂಡಿದ್ದ ಕೊಡವರ ಪ್ರಾಚೀನ ಮತ್ತು ಪಾರಂಪರಿಕ ಭೂಮಿಯನ್ನು ಮರುಸ್ಥಾಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದರು
