ದತ್ತಿ ಪ್ರಶಸ್ತಿಗೆ ಹಿರಿಯ ಸಾಹಿತಿ ನಾಗೇಶ್ ಕಾಲೂರ್ ಆಯ್ಕೆ

ಪುರುಷ ಸಾಹಿತಿಗಳಿಗೆ ಮೀಸಲಿಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ “ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ”ಗೆ ಜಿಲ್ಲೆಯ ಹಿರಿಯ ಸಾಹಿತಿ ನಾಗೇಶ್ ಕಾಲೂರು (Nagesh kaloor) ರವರು ರಚಿಸಿದ “ಶ್ರೀ ಕಾವೇರಿ ದರ್ಶನಂ – ಸಮಗ್ರ ಕಾವೇರಿ ಚರಿತೆ” ಕೃತಿಯು ಪುರಸ್ಕೃತ ಗೊಂಡಿದೆ. ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ರವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ಮೊದಲ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಬರಹಗಾರರ […]
ಮಾ.4 ರಿಂದ ಸೈಂಟ್ ಆ್ಯನ್ಸ್ ಪದವಿ ಕಾಲೇಜು ಎನ್‌ಎಸ್‌ಎಸ್ ಶಿಬಿರ

ವಿರಾಜಪೇಟೆ: ಮಾರ್ಚ್, 04 ರಿಂದ 10 ರವರೆಗೆ ವಿರಾಜಪೇಟೆಯ ಸೈಂಟ್ ಆ್ಯನ್ಸ್ ಪದವಿ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವು (NSS Camp) ವಿರಾಜಪೇಟೆ ತಾಲ್ಲೂಕು ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಮಾರ್ಚ್, 04 ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೇಟೋಳಿ ಗ್ರಾ.ಪಂ. ಅಧ್ಯಕ್ಷರಾದ ಅಚ್ಚಪಂಡ ಎಂ.ಬೋಪಣ್ಣ, ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ಹೆಗ್ಗಳ ಸ.ಹಿ.ಪ್ರಾ.ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ.ಆರ್. […]
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಮಡಿಕೇರಿ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಗಾಳಿಬೀಡಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ಆರೋಪಿ ಓರ್ವನನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ಬೆಟ್ಟತ್ತೂರು ನಿವಾಸಿ ಜಿ.ಆರ್. ಕಿರಣ್ ಕುಮಾರ್ (35) ಎಂಬಾತ ಬಂಧಿಸಲ್ಪಟ್ಟಿರುವ ಆರೋಪಿಯಾಗಿದ್ದಾನೆ. ಆರೋಪಿ ದಿನಾಂಕ 28-02-2025 ರಂದು ಗಾಳಿಬೀಡು ಗ್ರಾಮದ ಗಣಪತಿ ದೇವಾಲಯದ ಸಮೀಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಸರಬರಾಜು ಮಾಡಲು ಯತ್ನಿಸುತ್ತಿದ್ದುದರ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ 43 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡು […]
ಡ್ರಿಂಕ್ & ಡ್ರೈವ್ ಮತ್ತಿತರ ಟ್ರಾಫಿಕ್ ರೂಲ್ಸ್ ಉಲ್ಲಂಘನೆ: ಚಾಲಕನಿಗೆ 60 ಸಾವಿರ !

ಮದ್ಯ ಸೇವಿಸಿ ವಾಹನ ಚಲಾಯಿಸಬೇಡಿ, ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ ಮತ್ತು ಮೊಬೈಲ್ ನಲ್ಲಿ ಮಾತನಾಡಬೇಡಿ ಎಂದು ಪೊಲೀಸ್ ಇಲಾಖೆ ಅರಿವು ಮೂಡಿಸುತ್ತಲೇ ಇರುತ್ತದೆ. ಆದರೆ ಇದಕ್ಕೆ ಸೊಪ್ಪು ಹಾಕದ ಇಲ್ಲೋರ್ವ ಚಾಲಕ ಈ ಎಲ್ಲ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಬರೋಬ್ಬರಿ 60 ಸಾವಿರ ದಂಡ ವಿಧಿಸಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ (Traffic Police) ಠಾಣಾ ಪೊಲೀಸರು ಕೊಪ್ಪ ಗೇಟ್ ಬಳಿ ದಿನಾಂಕ 28/02/2025 ರಂದು ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿರುವ ಬಗ್ಗೆ ತಪಾಸಣೆ […]
Bengaluru Airport: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೇಶದ ಅತಿದೊಡ್ಡ ಕಾರ್ಗೋ ಟರ್ಮಿನಲ್ ಪ್ರಾರಂಭ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಆವರಣದಲ್ಲಿ ವಿನ್ಯಾಸ ಸಾಮರ್ಥ್ಯದಲ್ಲಿ ಭಾರತದಲ್ಲೇ ಅತಿದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್ (ಡಿಸಿಟಿ) ಪ್ರಾರಂಭವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮತ್ತು ವಾಯುಯಾನ ಸರಕು ಸಾಗಣೆ ಕ್ಷೇತ್ರದ ಮೆನ್ಜೀಸ್ ಏವಿಯೇಷನ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾದ 245,000 ಚದರ ಅಡಿ ವ್ಯಾಪ್ತಿಯ ಈ ಕಾರ್ಗೋ ಟರ್ಮಿನಲ್‌ನ್ನು, ದೇಶೀಯವಾಗಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆಯ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ವಿಶಾಲವಾಗಿ ವಿನ್ಯಾಸಗೊಳಿಸಲಾಗಿದೆ. ಕೈಗಾರಿಕೆಗಳ ಸಂಪರ್ಕ […]
ಕೊಡಗು ವಿವಿ ಮುಚ್ಚುವ ಕ್ರಮ ಖಂಡಿಸಿ ಬಿಜೆಪಿ, ಎಬಿವಿಪಿಯಿಂದ ಪಾದಯಾತ್ರೆ: ಸಂಸದ ಭಾಗಿ

ಕೊಡಗು ವಿವಿ (Kodagu University) ಮುಚ್ಚಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಳುವಾರ ಗ್ರಾಮದಿಂದ ಕುಶಾಲನಗರದ ವರೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಹಾಗೂ ಪಾದಯಾತ್ರೆಯಲ್ಲಿ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ (Yaduveer Wadiyar) ಪಾಲ್ಗೊಂಡರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಎಂಎಲ್ಸಿ ಸುಜಾಕುಶಾಲಪ್ಪ, ಭಾರತೀಶ್ ಮತ್ತಿತರರು ಭಾಗಿ. ನೂರಾರು ವಿದ್ಯಾರ್ಥಿಗಳುˌ ಕಾರ್ಯಕರ್ತರು ಹಾಗೂ ಯುವಜನತೆಯೊಂದಿಗೆ ಹೆಜ್ಜೆ ಹಾಕಿದರು. ಎರಡು ವರ್ಷಗಳ ಹಿಂದೆ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ […]
ಫ್ಲೂ ಲಸಿಕೆ ಪಡೆದು ಫ್ಲೂನಿಂದ ದೂರವಿರಿ ಹಾಗೂ ಆರೋಗ್ಯವಾಗಿರಿ

ಪ್ರತೀ ವರ್ಷದಲ್ಲೂ ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಜನರು ಫ್ಲೂನಿಂದ (Flu) ತೊಂದರೆಗೊಳಗಾಗುತ್ತಾರೆ. ಪ್ರತೀ ವರ್ಷ 100 ಕೋಟಿಗಿಂತಲೂ ಹೆಚ್ಚು ಫ್ಲೂ ಪ್ರಕರಣಗಳಲ್ಲಿ 3 ರಿಂದ 5 ಮಿಲಿಯನ್ ಮಂದಿ ಗಂಭೀರ ಪರಿಸ್ಥಿತಿ ಎದುರಿಸುತ್ತಾರೆ. ಸಾಮಾನ್ಯವಾಗಿ ಫ್ಲೂ ಅನ್ನು ಶೀತ ಎಂದು ಭಾವಿಸಲಾಗುತ್ತದೆ. ಆದರೆ ಫ್ಲೂ ನಿಮ್ಮ ದೈನಂದಿನ ಜೀವನ ಮತ್ತು ಕೆಲಸ ಕಾರ್ಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಅದಕ್ಕೆ ಫ್ಲೂನಿಂದ ಕ್ತ ಲಸಿಕೆ ಪಡೆಯುವುದು ಅವಶ್ಯವಾಗಿದೆ ಮತ್ತು ಲಸಿಕೆಯಿಂದ (Vaccine) ನಿಮ್ಮನ್ನು ನೀವು ರಕ್ಷಿಸಬಹುದಾಗಿದೆ. ಆದರೆ ಅನೇಕ ಜನರು […]
ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು, ಕಂಬಗಳು ಕಂಡುಬಂದರೆ ದೂರು ನೀಡಿ

ಮಡಿಕೇರಿ:-ಕೊಡಗು ಜಿಲ್ಲೆಯಾದ್ಯಂತ ಚೆಸ್ಕಾಂನ ವಿದ್ಯುತ್ ವಿತರಣಾ ಮಾರ್ಗಗಳು ಬಹುತೇಕ ತೋಟಗಳು, ಅರಣ್ಯ ಪ್ರದೇಶಗಳ ಮಧ್ಯೆ ಹಾಗೂ ಕಡಿದಾದ ಬೆಟ್ಟಗುಡ್ಡಗಳ ಅಂಚಿನಲ್ಲಿ ಹಾದುಹೋಗುತ್ತಿದ್ದು, ಮಳೆಗಾಲದ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಮರದ ಕೊಂಬೆಗಳು ಬೀಳುವಂತದ್ದು, ಕಡಿದಾದ ಗುಡ್ಡಗಳ ಜರಿತದಿಂದ ಕಂಬಗಳು ಬಾಗಿ, ತಂತಿಗಳು ತೀರಾ ಅಪಾಯಮಟ್ಟದಲ್ಲಿ ಜಾರುವಂತಹ ಸನ್ನಿವೇಶಗಳು ಎದುರಾಗಬಹುದು. ಇದರಿಂದಾಗಿ ವಿದ್ಯುತ್ ಅಪಘಾತಗಳಾಗುವ ಸಂಭವವಿರುತ್ತದೆ. ಆದ್ದರಿಂದ, ಅಪಾಯ ಮಟ್ಟದಲ್ಲಿರುವ ವಿದ್ಯುತ್ ತಂತಿಗಳು (Power lines) ಶಿಥಿಲಗೊಂಡಿರುವ ಕಂಬಗಳು ಕಂಡುಬಂದರೆ ಈ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ 24*7 […]
Virajpet MLA Ponnanna: ಕೊಡಗು ವಿಶ್ವವಿದ್ಯಾಲಯದ ಕ್ಲೋಸ್‌ಗೆ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರ ನಿಲುವೇನು?

ಮಡಿಕೇರಿ: ಕೊಡಗು ವಿಶ್ವವಿದ್ಯಾಲಯವನ್ನು (Kodagu University) ಮುಚ್ಚುವ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಯ ವಿರುದ್ಧ ಮಡಿಕೇರಿ ಶಾಸಕ ಮಂತರ್ ಗೌಡ ಅವರ ದಿಟ್ಟ ನಿಲುವನ್ನು ಶ್ಲಾಘಿಸಬೇಕಿದೆ. ಮೇಲ್ನೋಟಕ್ಕೆ, ಹಿಂದಿನ ಬಿಜೆಪಿ ಸರ್ಕಾರವು ಪ್ರಾರಂಭಿಸಿದ ವಿಶ್ವವಿದ್ಯಾಲಯಗಳನ್ನು ರಾಜಕೀಯ ಕಾರಣಗಳಿಗಾಗಿ ಮುಚ್ಚಲು ಸಿದ್ದರಾಮಯ್ಯ ಸರ್ಕಾರ ಬಯಸುತ್ತಿರುವಂತೆ ಕಾಣುತ್ತದೆ ಎಂದಿದ್ದಾರೆ. ಕಾಡಂಚಿನ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಎ.ಎಸ್.ಪೊನ್ನಣ್ಣ ಚಾಲನೆ ಪ್ರಸ್ತುತ ಕಾಂಗ್ರೆಸ್ ಆಡಳಿತವು ನೀಡಿರುವ ನೆಪವೆಂದರೆ ವಿಶ್ವವಿದ್ಯಾಲಯಗಳು ಅಸಮರ್ಪಕ ಮೂಲಸೌಕರ್ಯ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಕಾರ್ಯಸಾಧ್ಯವಲ್ಲ ಅನ್ನೋದು. ಕಾಂಗ್ರೆಸ್ ಪಕ್ಷದವರೇ […]
Requirement: ಕೊಡಗು ಜಿಲ್ಲಾ ಟೆಕ್ನಿಕಲ್ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಆಹ್ವಾನ

ಕೊಡಗು (Kodagu) ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ಜಿಲ್ಲಾ ಟೆಕ್ನಿಕಲ್ ಪ್ರೋಗ್ರಾಮರ್ ಹುದ್ದೆಯು (Requirement) ಖಾಲಿ ಇದ್ದು, ಈ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲೆಯ ಅಧಿಕೃತ ವೆಬ್‍ಸೈಟ್ https://kodagu.nic.nic.in ರಲ್ಲಿ ಪಡೆದು ಭರ್ತಿ ಮಾಡಿ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಕಚೇರಿ ವಿಳಾಸ ಜಿಲ್ಲಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ, ಜಿಲ್ಲಾ ಟೆಕ್ನಿಕಲ್ ಪ್ರೋಗ್ರಾಮರ್ ಹುದ್ದೆ, ಹುದ್ದೆಯ ಸಂಖ್ಯೆ 01, […]